ಕನ್ನಡದ ಒಂದು ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಬೆಚ್ಚಿ ಬೀಳ್ತಿರಾ!

ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ! ಸಾನ್ವಿ ಎಂಬ ಪಾತ್ರದಿಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು ಈ ಕೊಡಗಿನ ಬೆಡಗಿ. ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ ಸಮಯದಲ್ಲಿ ಸ್ಟೇಟ್ ಕ್ರಶ್ ಆಗಿ ಕೂಡ ಮಿಂಚುತಿದ್ದರು ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಸಿನೆಮಾವೂ ಹಿಟ್ ಆಯಿತು, ಅಲ್ಲೇ ರಕ್ಷಿತ್ ಶೆಟ್ಟಿ ಜೊತೆ ಕೂಡ ಲವ್ವು ಆಯಿತು.

Loading...

ತದ ನಂತರ ಕನ್ನಡ ಬಿಗ್ ಸ್ಟಾರ್ಗಳ ಜೊತೆ ನಟಿಸಿ ಕನ್ನಡದ ಟಾಪ್ ನಾಯಕಿಯಾಗಿ ಪ್ರಸಿದ್ದಿ ಹೊಂದಿದರು. ಆಮೇಲೆ ತೆಲುಗು ಸಿನಿಮಾ ರಂಗಕ್ಕೂ ಕಾಲಿಟ್ಟರು. ‘ಗೀತಾ ಗೋವಿಂದಂ’ ಸಿನಿಮಾದ ಮೂಲಕ ವಿಜಯ್ ದೇವರಕೊಂಡ ಅವರ ಜೊತೆ ಅಭಿನಯಿಸಿ ಇಡೀ ದಕ್ಷಿಣ ಭಾರತದಲ್ಲೇ ಫೇಮಸ್ ಆದರು. ಐದು ಕೋಟಿಯ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 130 ಕೋಟಿ.

‘ಗೀತಾ ಗೋವಿಂದಂ’ ಸಿನಿಮಾದ ಯಶಸ್ಸಿನ ಬಳಿಕ ರಕ್ಷಿತ್ ಜೊತೆ ನಿಶಿತಾರ್ಥವನ್ನು ಮುರಿದು ಹಾಕಿದರು. ಈ ವಿಷಯವೂ ತುಂಬಾ ಚರ್ಚೆಗೆ ಕಾರಣವಾಗಿತ್ತು. ಆ ಬಳಿಕ ಒಂದು ಸಿನೆಮಾವೂ ರಶ್ಮಿಕಾ ಅವರದ್ದು ಬಿಡುಗಡೆಗೊಳ್ಳಲಿಲ್ಲ. ಕೆಲವು ಸಿನೆಮಾಗಳೂ ಈಗ ಚಿತ್ರೀಕರಣದ ಹಂತದಲ್ಲಿದ್ದು, ತೈಲವ ವಿಜಯ್ ಜೊತೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಇದೆ.

ಇನ್ನು ಕನ್ನಡದ ‘ವೃತ್ತ’ ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ರಶ್ಮಿಕಾ ಮಂದಣ್ಣ ‘ನಾನು ಈ ಸಿನಿಮಾ ಮಾಡುವುದಿಲ್ಲ ಎಂದು ಹೇಳಿ ಆ ಸಿನಿಮಾಕ್ಕೆ ಗುಡ್ ಬೈ ಕೂಡ ಹೇಳಿದ್ದಾರೆ. ಯಾವ ಕಾರಣಕ್ಕೆ ಆ ಸಿನಿಮಾ ಮಾಡುವುದಿಲ್ಲ ಎಂದು ಇದುವರೆಗೂ ಎಲ್ಲಿಯೂ ಹೇಳಲಿಲ್ಲ. ಇವರ ಮುಂದಿನ ಕನ್ನಡ ಸಿನಿಮಾ ‘ಯಜಮಾನ’ ಆಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ ಜೊತೆ ಕಾಣಿಸಲಿದ್ದಾರೆ.

ಅದಾದ ಬಳಿಕ ಧ್ರುವ ಸರ್ಜಾ ಜೊತೆ ‘ಪೊಗರು’ ಸಿನೆಮಾದಲ್ಲೂ ಇವರೇ ನಟಿಯೆಂದು ಸುದ್ದಿಗಳು ಹರಡಿದ್ದು, ಅವರ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ. ಈ ಮೊದಲು 10 , 15 ಲಕ್ಷ ಇದ್ದ ಸಂಭಾವನೆ ಈಗ ಬರೋಬ್ಬರಿ 65 ರಿಂದ 70 ಲಕ್ಷ ಇದೆಯಂತೆ. ಅದೇನೇ ಇರಲಿ, ಅವರ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬಂದಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಎಲ್ಲೊ ಒಂದು ಕಡೆ ಕಪ್ಪು ಚುಕ್ಕೆ ಇದ್ದರೂ ಅದನ್ನು ತೋರದಂತೆ ಸಿನಿಮಾ ರಂಗದಲ್ಲಿ ಸಾಧನೆ ಮಾಡಬೇಕೆಂದು ಛಲ ಹೊತ್ತಿದ್ದಾರೆ ರಶ್ಮಿಕಾ ಮಂದಣ್ಣ.

Loading...