ಪಾಕಿಸ್ತಾನದಲ್ಲೂ ನಿಲ್ಲದ ಕೆಜಿಎಫ್ ಹವಾ! ಮೊಟ್ಟ ಮೊದಲ ಕನ್ನಡದ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆ!

ಭಾರತದ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಟ ಯಶ್ ಅಭಿನಯದ ಕೆಜಿಎಫ್ ಇವತ್ತು ಪಾಕಿಸ್ತಾನದಲ್ಲೂ ಬಿಡುಗಡೆಗೊಂಡಿದೆ. ಪಾಕಿಸ್ತಾನದ ಜನರ ಬೇಡಿಕೆಯಿಂದಾಗಿ ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದ್ದು, ಅಲ್ಲೂ ಯಶ್ ಹವಾ ಮುಂದುವರೆದಿದೆ.

Loading...

ಬೆನ್ನಿಂದ ಬೆನ್ನಿಗೆ ಇತಿಹಾಸ ಸೃಷ್ಟಿಸುತ್ತಿರುವ ಕೆಜಿಎಫ್ ಸಿನಿಮಾ, ಈಗ ಪಾಕಿಸ್ತಾನದಲ್ಲಿ ಬಿಡುಗಡೆಗೊಂಡು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಕನ್ನಡದ ಸಿನೆಮಾ ರಿಲೀಸ್ ಆದ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ.

ಅಂದ ಹಾಗೆ ಪಾಕಿಸ್ತಾನಿಗಳಿಗೆ ಭಾರತದ ಸಿನಿಮಾ ಹೊಸದೇನಲ್ಲ. ಅವರ ಭಾಷೆ ಹಿಂದಿಯಾಗಿರುವುದರಿಂದ ಬಾಲಿವುಡ್ ಸಿನೆಮಾಗಳೂ ಅಲ್ಲಿ ಬಿಡುಗಡೆಗೊಳ್ಳುತ್ತದೆ. ಕೆಜಿಎಫ್ ಟ್ರೈಲರ್ ನೋಡಿಯೇ ಫಿದಾ ಆಗಿದ್ದರೂ, ಸಿನಿಮಾ ಯಾವಾಗ ರಿಲೀಸ್ ಮಾಡುತ್ತೀರಿ ಎಂದು ಕೇಳುತ್ತಿದ್ದರು ಪಾಕಿಸ್ತಾನಿಗಳು. ಅವರ ಕನಸು ನಿಜವಾಯಿತು, ಮತ್ತು ಕನ್ನಡದ ಸಿನೆಮಾವೂ ಅಲ್ಲಿ ರಾರಾಜಿಸಿತು.

Loading...