ಅಜ್ಜಿಯಂತೆ ವೇಷ ಧರಿಸಿ ಶಬರಿಮಲೆ ಪ್ರವೇಶಿಸಿದ 36 ರ ದಲಿತ ಮಹಿಳೆ!

ಸುಪ್ರೀಮ್ ಕೋರ್ಟ್ ಆದೇಶದ ನಂತರ ವಿರೋಧವಿದ್ದರೂ ಹತ್ತು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಈಗ ಮತ್ತೊಂದು ಷಾಕಿಂಗ್ ವಿಷಯವೆಂದರೆ 36 ರ ಮಹಿಳೆ ಪ್ರತಿಭಟನಾಕಾರಿಗಳಿಗೆ ಹೆದರಿ ಅಜ್ಜಿಯಂತೆ ಶಬರಿಮಲೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾಳೆ ಎಂದು ತಿಳಿದು ಬಂದಿದೆ.

Loading...

ಅಜ್ಜಿಯ ಹಾಗೆ ಕಾಣುವಂತೆ ಮೇಕಪ್ ಮಾಡಿ, ನಿನ್ನೆ ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಕೇರಳ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್‌.ಪಿ. ಮಂಜು ಅವರು ಹೇಳಿದ್ದಾರೆ. ಅಲ್ಲದೆ ಅಲ್ಲಿಗೆ ಹೋಗಿ ತಾನು ಹೋದ, ವೇಷ ಕಳಚಿದ ವಿಡಿಯೋವನ್ನು ಕೂಡ ಸಾಮಜಿಕ ಜಾಲತಾಣಗಳಲ್ಲಿ ಹಾಕಿದ್ದಾಳೆ.

ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರಿಂದ ಇರುಮುಡಿಕಟ್ಟು ಹಾಗೂ ಪೂಜಾ ವಿಧಾನಗಳ ಬಗ್ಗೆ ಆಕೆಗೆ ಗೊತ್ತಿರಲಿಲ್ಲ. ಕೆಲವರು ಆಕೆಯನ್ನು ಗುರುತಿಸಿದರೂ ಪ್ರತಿಭಟನೆ ಮಾಡಲು ಹೋಗಲಿಲ್ಲವಂತೆ. ಮತ್ತು ಪೊಲೀಸರು ಆಕೆಗೆ ತುಂಬಾನೇ ಬೆಂಬಲಿಸಿದ ಕಾರಣ, ಆಕೆಗೆ ತುಂಬ ಧೈರ್ಯ ಬಂತಂತೆ. ಅಜ್ಜಿಯಂತೆ ಡ್ರೆಸ್ ಮಾಡಿಕೊಂಡು, ತಲೆಗೆ ಕೂದಲಿಗೆ ಪವಿದ್ರ ಬೂದಿ ಹಚ್ಚಿಕೊಂಡು ದೊಡ್ಡ ಕೀವಿಯೋಲೆ ಹಾಗೂ ಬಿಂದಿ ಧರಿಸಿಕೊಂಡು ಹೋಗಿದ್ದಾಳೆ ಈ ದಲಿತ ನಾಯಕಿ.

Loading...